1. ಕರ್ನಾಟಕ ಪಶುವೈದ್ಯಕೀಯ ಪರಿಷತ್ ಕಾಯ್ದೆ 1984 ಮತ್ತು ಕರ್ನಾಟಕ ಪಶುವೈದ್ಯಕೀಯ ಪರಿಷತ್ ನಿಯಮಗಳು 1998 ಇವುಗಳ ಅನುಷ್ಠಾನ.
 2. ರಾಜ್ಯ ವೃತ್ತಿ ಪಶುವೈದ್ಯರ ನೋಂದಣಿ ರಿಜಿಸ್ಟರಿನ ತಯಾರಿಕೆ ಮತ್ತು ನಿರ್ವಹಣೆ(ಎಸ್ವಿಪಿಆರ್):
  • ಎಸ್ವಿಪಿಆರ್ ಅಗತ್ಯ ಸೇರ್ಪಡೆ/ತೆಗೆದು ಹಾಕುವುದು ಅಥವಾ ಮಾರ್ಪಾಡುಗಳನ್ನು ಕೈಗೊಳ್ಳುವುದು.
  • ಎಸ್ವಿಪಿಆರ್ ನ್ನು ಕಾಲಕಾಲಕ್ಕೆ ಉನ್ನತೀಕರಿಸುವುದು.
  • ಭಾರತೀಯ ಪಶುವೈದ್ಯಕೀಯ ವೃತ್ತಿನಿರತ ರಿಜಿಸ್ಟಾರಿನಲ್ಲಿ ಅಗತ್ಯ ಮಾರ್ಪಾಡುಗಳಿಗಾಗಿ ಸಂವಹನಾ ಕಾರ್ಯಾ.
 3. ಭಾರತೀಯ ಪಶುವೈದ್ಯಕೀಯ ಪರಿಷತ್(ನೊಂದಣಿ) ರೆಗ್ಯುಲೇಷನ್ 1992 ಇದರ ಅನುಷ್ಠಾನ
 4. ಭಾರತೀಯ ಪಶುವೈದ್ಯಕೀಯ ಪರಿಷತ್ (ಸ್ಟಾಂಡರ್ಡ್ ಆಫ್ ಪ್ರೋಫೆಶನಲ್ ಕಂಡಕ್ಟ್ ಎಟಿಕ್ವೇಟ್ & ಕೋಡ್ ಆಪ್ ಡಲೆಕ್ಸ್ ಫಾಗ್ ವೆಟೆರಿನರಿ ಪ್ರಾಕ್ಟೀಶನರ್ಸ್) ರೆಗ್ಯುಲೇಶನ್ 1992 ಇದರ ಅನುಷ್ಠಾನ.
 5. ಭಾರತೀಯ ಪಶುವೈದ್ಯಕೀಯ ಪರಿಷತ್(ವೃತ್ತಿನಿರತ ಪಶುವೈದ್ಯರ) ರೆಗ್ಯುಲೇಶನ್ಸ್2005 ಇದರ ಅನುಷ್ಠಾನ
 6. ಪಶುವೈದ್ಯಕೀಯ ಶಿಕ್ಷಣಕ್ಕೆ ಕನಿಷ್ಠ ಗುಣಮಟ್ಟಕ್ಕಾಗಿ ಅಗತ್ಯ ಸಲಹೆ ಮತ್ತು ಶಿಫಾರಸ್ಸುಗಳನ್ನು ನೀಡುವುದು.
 7. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕಾಲ ಕಾಲಕ್ಕೆ ರೂಪಿಸಲ್ಪಡಬಹುದಾದ ಯಾವುದೇ ಕಾಯ್ದೆ ಮತ್ತು ನಿಯಮಗಳ ಅನುಷ್ಠಾನ
 8. ಮುಂದುವರಿದ ಪಶುವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಪ್ರೋಫೆಶನಲ್ ಎಫಿಶಿಯೆನ್ಸಿ ಡೆವೆಲಫ್ಮೆಂಟ್ ಕಾರ್ಯಕ್ರಮದ ಅನುಷ್ಠಾನ.

 

ಮುಂದುವರಿದ ಪಶುವೈದ್ಯಕೀಯ ಶಿಕ್ಷಣ

ವೃತ್ತಿನಿರತ ಪಶುವೈದ್ಯರ ಸೇವಾ ಗುಣಮಟ್ಟ ಮತ್ತು ತಾಂತ್ರಿಕ ಕೌಶಲ್ಯ ಜ್ಞಾನವನ್ನು ವೃದ್ಧಿಸಲು ಮುಂದುವರಿದ ಪಶುವೈದ್ಯಕೀಯ ಶಿಕ್ಷಣವು ಸಹಕಾರಿಯಾಗಿದೆ. ಈ ಉದ್ದೇಶಕ್ಕಾಗಿ ತಜ್ಞರುಗಳಿಂದ ಶಿಫಾರಸುಗೊಂಡಿರುವ ವಿಷಯಗಳು ಕೆಳಕಂಡಂತಿವೆ

 • ಪಶುವೈದ್ಯಕೀಯ ಮತ್ತು ಪಶುಸಂಗೋಪನೆಗೆ ನೇರವಾಗಿ ಸಂಬಂಧಿಸಿದ ವೇತ್ತಿ ಪರತೆ ಮತ್ತು ತಾಂತ್ರಿಕ ಜ್ಞಾನವನ್ನು ಉನ್ನತೀಕರಿಸುವ ಜ್ಞಾನ ವಿಷಯಾಧಾರಿತ ಕಾರ್ಯಾಕ್ರಮಗಳು.
 • ವೃತ್ತಿನಿರತ ಪಶುವೈದ್ಯರ ಕೌಶಲ್ಯ ಮತ್ತು ಕ್ಷಮತೆಯನ್ನು ವೃದ್ಧಿಸಲು ಜಾನುವಾರು ಆರೋಗ್ಯ ವ್ಯವಸ್ಥೆ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಉತ್ಪಾದನೆ ತಾಂತ್ರಿಕತೆಗಳು ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ಕೌಶಲ್ಯ/ ತಾಂತ್ರಿಕತೆ ಆಧಾರಿತ ಕಾರ್ಯಾಕ್ರಮಗಳು
 • ರೋಗ ಪತ್ತೆ ಮತ್ತು ಉತ್ಪಾದನೆ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಕ್ಷಮತೆಯನ್ನು ವೃದ್ಧಿಸುವ ತಾಂತ್ರಿಕ ಕ್ಷಮತೆ ವೃದ್ಧಿ ಕಾರ್ಯಾಕ್ರಮಗಳು.
 • ಪ್ರಸ್ತುತ ಪ್ರಚಲಿತ ವಿದ್ಯಮಾನಗಳನ್ನು ಮತ್ತು ವೃತ್ತಿನಿರತ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸುವ ಪುನಶ್ಚೇತನಾ ತರಬೇತಿ ಕಾರ್ಯಾಕ್ರಮಗಳು.
 • ಕಾರ್ಯಾಕ್ರಮಗಳನ್ನು ಪರಸ್ಪರ ಚರ್ಚಾ ಪದ್ದತಿ ಮತ್ತು ಕಲಿಕೆ ಪದ್ದತಿಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಅನುಸಂಧಾನ ಸಂಸ್ಥೆಗಳು ಮತ್ತು ನಿರ್ಧಿಷ್ಟ ವಿಷಯಗಳ ತಾಂತ್ರಿಕ ಪರಿಣಿತರ ಸೇವೆಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ.
 • ಕರ್ನಾಟಕ ಪಶುವೈದ್ಯಕೀಯ ಪರಿಷತ್ ಸಂಸ್ಥೆಯು, ಮುಂದುವರಿದ ಪಶುವೈದ್ಯಕೀಯ ಶಿಕ್ಷಣದ ಅಡಿಯಲ್ಲಿ ವಿಚಾರ ಸಂಕಿರಣಗಳು ತಾಂತ್ರಿಕ ಘೋಷ್ಟೀಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ.
 • ಕಾರ್ಯಾಕ್ರಮಗಳ ರೂಪುರೇಷೆ ಮತ್ತು ವೇಳಾಪಟ್ಟಿಗಳು ಮುಂಗಡವಾಗಿ ಗುರುತಿಸಲ್ಪಟ್ಟ ವಿಷಯಗಳ ಮಾದರಿಗಳಲ್ಲಿರುತ್ತವೆ.