ನಿಗದಿತ ಶುಲ್ಕದೊಂದಿಗೆ ಈ ಕೆಳಗಿನ ದಾಖಲೆಗಳನ್ನು ಅವುಗಳ ಎರಡು ದೃಢೀಕೃತ ಪ್ರತಿಗಳೊಂದಿಗೆ ವೈಯಕ್ತಿಕವಾಗಿ ಸಲ್ಲಿಸಬೇಕು.

 1. ನೋಂದಣಿ ಅರ್ಜಿ – ಫಾರ್ಮ್ VIII
 2. ಮೂಲ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಮತ್ತು ಅಂಕ ಪಟ್ಟಿ
 3. ಮೂಲ ಪದವಿ ಪ್ರಮಾಣಪತ್ರ
 4. ಜನ್ಮ ದಿನಾಂಕದ ಪುರಾವೆ
 5. ಎರಡು ಪಾಸ್ಪೋರ್ಟ್ ಮತ್ತು ಎರಡು ಸ್ಟಾಂಪ್ ಅಳತೆಯ ಭಾವಚಿತ್ರಗಳು

ಅರ್ಜಿಯ ನಮೂನೆ ಇಲ್ಲಿ ಲಭ್ಯವಿದೆ.

ಸೂಚನೆ:

 • ಕರ್ನಾಟಕ ಪಶುವೈದ್ಯಕೀಯ ವೃತ್ತಿಪರರ ರಿಜಿಸ್ಟರಿಯು ಭಾರತೀಯ ಪಶುವೈದ್ಯಕೀಯ ಪರಿಷತ್ತು ಕಾಯಿದೆ 1984 ಮತ್ತು ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ಕಾಯಿದೆ 1998 ಗಳ ಅನ್ವಯ ನೊಂದಾಯಿತಗೊಂಡಿರುವ ಪಶುವೈದ್ಯಕೀಯ ವೃತ್ತಿಪರರ ಮಾಹಿತಿಯನ್ನು ಒಳಗೊಂಡಿರುತ್ತದೆ.
 • ನೋಂದಣಿ ಒಂದು ಶಾಸನಬದ್ಧ ಅವಶ್ಯಕತೆಯಾಗಿದೆ ಮತ್ತು ಕರ್ನಾಟಕದ ಪಶುವೈದ್ಯ ವೃತ್ತಿಯಲ್ಲಿ ತೊಡಗಿರುವ ಎಲ್ಲಾ ಪಶುವೈದ್ಯರು ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
 • ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಗುರುತಿಸಲ್ಪಟ್ಟ ಪಶುವೈದ್ಯಕೀಯ ಪದವಿ ಹೊಂದಿರುವ ವ್ಯಕ್ತಿಗಳು ನೋಂದಣಿಗೆ ಅರ್ಹರಾಗಿರುತ್ತಾರೆ.
 • ನೋಂದಣಿಯು ಮೊದಲ ಬಾರಿ ಐದು ವರ್ಷಗಳ ಅವಧಿ ಹೊಂದಿರುತ್ತದೆ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಬೇಕಾಗಿರುತ್ತದೆ.
 • ಸದಸ್ಯರು ನಿರ್ದಿಷ್ಟ ದಿನಾಂಕದ ಮೊದಲು ನವೀಕರಣ ಮಾಡುವ ಮೂಲಕ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ.
 • ಸಂಬಂಧಪಟ್ಟ ವರ್ಷದ ಏಪ್ರಿಲ್ 1 ನೇ ದಿನದ ಮೊದಲು ನೊಂದಣಿಯ ನವೀಕರಣವನ್ನು ಮಾಡಿಕೊಳ್ಳಬಹುದಾಗಿದೆ.
 • ಮಾನ್ಯತೆ ಪಡೆದಿರುವ ಪಶುವೈದ್ಯಕೀಯ ಪದವಿಯೊಂದಿಗೆ ಹೆಚ್ಚುವರಿಯಾಗಿ ಪಶುವೈದ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮ ಪಡೆದಿದ್ದಲ್ಲಿ, ಅಂತಹ ಪದವಿ ರಿಜಿಸ್ಟ್ರಿಯಲ್ಲಿ ದಾಖಲಿಸಿಕೊಳ್ಳಲು ಅರ್ಹತೆ ಪಡೆದಿದೆ.
 • ನೋಂದಾಯಿತ ಪಶುವೈದ್ಯರು ತಮ್ಮ ನಿವಾಸ ಅಥವಾ ಕಛೆರಿ ವಿಳಾಸದಲ್ಲಿ ಯಾವುದೇ ಬದಲಾವಣೆಗಳಾದರೆ, ಅಂತಹ ಬದಲಾವಣೆಗಳನ್ನು 90 ದಿನಗಳ ಒಳಗಾಗಿ ಪರಿಷತ್ತಿಗೆ ತಿಳಿಸುವ ಅಗತ್ಯವಿದೆ.
 • ಮತ್ತೊಂದು ರಾಜ್ಯದಲ್ಲಿ ನೊಂದಾಯಿಸಿಕೊಳ್ಳುವ ಮೊದಲ ಚಾಲ್ತಿಯಲ್ಲಿರುವ ಮೂಲ ನೊಂದಣಿ ಪ್ರಮಾಣಪತ್ರವನ್ನು ಹಿಂತಿರುಗಿಸಿ, “ಆಕ್ಷೇಪಣೆ ರಹಿತ ಪ್ರಮಾಣಪತ್ರ” ಪಡೆದುಕೊಳ್ಳಬೇಕು.
 • ನೊಂದಣಿ ಪ್ರಮಾಣಪತ್ರ ಕಳೆದುಹೋದ ಪಕ್ಷದಲ್ಲಿ ತೃಪ್ತಿಕರ ಪುರಾವೆಗಳನ್ನು ಲಿಖಿತ ಮೂಲಕ ಸಲ್ಲಿಸಿದ ನಂತರ ಪ್ರಮಾಣಪತ್ರದ ಮತ್ತೊಂದು ಪ್ರತಿಯನ್ನು ಪಡೆಯಬಹುದು.